ಗಝಲ್

ಗಝಲ್ ಮಾಲತಿ ಹೆಗಡೆ ಎದೆಯ ಮಧುಬನವ ಹದಗೆಡಿಸಿ ತೊರೆದು ಹೋದೆ ನೀನುಮನದ ಮೃದು ಭಾವ ಚೆದುರಿಸಿ ತೊರೆದು ಹೋದೆ ನೀನು ಲೋಕನಿಂದೆಗೆ ಕಿವುಡಾಗಿ ನಿನ್ನವಳಾಗಿದ್ದೆನೋ ಗಿರಿಧರಾನನ್ನನೀ ಭವದ ಭಾಧೆಗೆ ಸಿಲುಕಿಸಿ ತೊರೆದು ಹೋದೆ ನೀನು ಕಡೆದ ಮಜ್ಜಿಗೆಯಲ್ಲೆತ್ತಿದ ಶುದ್ಧ ನವನೀತದಂತಿತ್ತು ನನ್ನೊಲವುರಾಧೆಯ ರೋದನವ ಕಡೆಗಣಿಸಿ ತೊರೆದು ಹೋದೆ ನೀನು ಇಹ ಪರದ ಚಿಂತೆಯನೆಲ್ಲ ತೂರಿ ವೇಣು ನಾದದಲಿ ಕರಗಿದ್ದೆಜೀವ ಭಾವದ ನಂಟು ಕತ್ತರಿಸಿ ತೊರೆದು ಹೋದೆ ನೀನು ಮರುಳೋ ಮಾಯೆಯೋ ಅರಿಯದ ಕಡುಮೋಹಿಯಾಗಿದ್ದೆಆತ್ಮಸಾಂಗತ್ಯದಲಿ ಅಧೀನವಾಗಿಸಿ ತೊರೆದು ಹೋದೆ … Continue reading ಗಝಲ್